Lunar Eclipse 2025: ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ ಕಣ್ತುಂಬಿಕೊಳ್ಳುವ ಅದ್ಭುತ ಅವಕಾಶ; ಮಿಸ್ ಮಾಡಿಕೊಳ್ಳದೇ ಇಲ್ಲಿಗೆ ಭೇಟಿ ನೀಡಿ!

ನಭೋ ಮಂಡಲದಲ್ಲಿ ಇಂದು ಕೌತುಕದ ಕ್ಷಣ ಸೃಷ್ಟಿಯಾಗಲಿದೆ. 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ ಇಂದು ರಾತ್ರಿ 9:57 ರಿಂದ ಮಧ್ಯರಾತ್ರಿ 1:26ರ ವರೆಗೂ ಗೋಚರವಾಗಲಿದೆ. ಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇಗುಲಗಳು ಬಂದ್ ಆಗಲಿವೆ. ಬೆಂಗಳೂರಿನಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು: ಗ್ರಹಣ ಅಂದರೆ ಖಗೋಳದಲ್ಲಿ (astronomy) ನಡೆಯೋ ವಿಸ್ಮಯ. ಮನುಷ್ಯನ ಊಹೆಗೂ ನಿಲುಕದಂತಾ ಅಚ್ಚರಿ. ಗ್ರಹಣ ಅಂದ್ರೆ ಎಷ್ಟು ಕೌತುಕವೋ, ಅಷ್ಟೇ ಆತಂಕ. ಅಷ್ಟೇ ಭಯ, ಗ್ರಹಣ ಅನ್ನೋದು ದೇವರನ್ನೂ ಬಿಟ್ಟಿಲ್ಲ. ಹೀಗಾಗಿ ಗ್ರಹಣದ ಬಗ್ಗೆ ಭಾರತದಲ್ಲಿ ತುಂಬಾನೇ ನಂಬಿಕೆಗಳಿವೆ. ಗ್ರಹಣದಿಂದ (lunar eclipse) ಯಾರಿಗೆ ಕೆಟ್ಟದಾಗುತ್ತೆ, ಯಾರಿಗೆ ಒಳ್ಳೇದಾಗುತ್ತೆ ಅನ್ನೋ ಚರ್ಚೆಗಳು ಸಹ ಹುಟ್ಕೊಳ್ತವೆ. ಗ್ರಹಣದಿಂದ ಯಾರಿಗೆ ಕೆಟ್ಟದ್ದಾಗುತ್ತೆ? ಏನಾಗುತ್ತೆ ಅನ್ನೋ ಭಯ ಎಲ್ಲರಲ್ಲೂ ಕಾಡುತ್ತೆ. ಭಾರತದಲ್ಲಿ (India) ಇಂದು ಖಗ್ರಾಸ ಚಂದ್ರಗ್ರಹಣ ಸಂಭವಿಸುತ್ತಿದೆ. 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತಿದ್ದು, 7 ವರ್ಷದ ನಂತ್ರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ..
ಬೆಳಗಾವಿ: ರಾತ್ರಿ 9:57 ರಿಂದ ಮಧ್ಯರಾತ್ರಿ 1 ಗಂಟೆ 26 ನಿಮಿಷದ ವರೆಗೂ ಚಂದ್ರಗ್ರಹಣ ಗೋಚರಿಸಲಿದೆ. ಹೀಗಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯಲಿವೆ. ಬೆಳಗಾವಿಯಲ್ಲೂ ಚಂದ್ರಗ್ರಹಣ ಹಿನ್ನಲೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ತಯಾರಿ ನಡೆಸಿದ್ದಾರೆ. ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ಬಿಲ್ವಪತ್ರೆಯಿಂದಲೇ ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ.
ಕೊಪ್ಪಳ: ಖಗ್ರಾಸ ಚಂದ್ರಗ್ರಹಣ ಇರೋದ್ರಿಂದ ಕೊಪ್ಪಳದ ಶಕ್ತಿ ದೇವತೆ ಹುಲಿಗೆಮ್ಮ ದೇವಸ್ಥಾನವನ್ನ ಬಂದ್ ಮಾಡಲಾಗುತ್ತೆ. ಗ್ರಹಣ ಆರಂಭಕ್ಕೂ ಮುನ್ನವೇ ಅಂದ್ರೆ ಸಂಜೆ 5 ಗಂಟೆಯಿಂದ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ.
--------------------------------------------------------------------------------------------------------------
Previous Post Next Post