- Published by:Sandeep Kumar T
- Newstationkannada
ಕೇಂದ್ರ ಸರ್ಕಾರ ಈಗ ಜಿಎಸ್‌ಟಿ ಪರಿಷ್ಕರಣೆ ಮಾಡಿ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದೆ. ದಿನಬಳಕೆ ವಸ್ತುಗಳು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಿದೆ. ಆದರೆ ಅದರಂತೆ ಸಿಗರೇಟ್, ಪಾನ್ ಮಸಾಲ ಸೇರಿ ಮತ್ತಷ್ಟು ವಸ್ತುಗಳ ಮೇಲೆ 40% ಜಿಎಸ್‌ಟಿ ಹಾಕಿದೆ. ಆದರೆ ಮದ್ಯದ ಮೇಲೆ ಜಿಎಸ್‌ಟಿ ಪರಿಣಾಮ ಬೀರಿಲ್ಲ. ಯಾಕೆ? ಇದರ ಹಿಂದಿನ ಕಾರಣವೇನು? ಇಲ್ಲಿದೆ ನೋಡಿ.
ನವದೆಹಲಿ: ಭಾರತ ಸರ್ಕಾರ (Indian Government) ಇತ್ತೀಚೆಗೆ ಜಿಎಸ್‌ಟಿ 2.0 (GST 2.0) ಸುಧಾರಣೆಯಡಿ ಸರಕು ಮತ್ತು ಸೇವಾ ತೆರಿಗೆ (GST) ದರಗಳನ್ನು ಪರಿಷ್ಕರಿಸಿದ್ದು, ಇದು ಸೆಪ್ಟೆಂಬರ್ 22, 2025ರಿಂದ ಜಾರಿಗೆ ಬರಲಿದೆ. ಈ ಸುಧಾರಣೆಯ ಪ್ರಮುಖ ಭಾಗವಾಗಿ ಮಧ್ಯಮ ವರ್ಗದ ಜನರಿಗೆ (Middle Class People) ಬಹಳಷ್ಟು ಅನುಕೂಲವಾಗಿದೆ. ದಿನಬಳಕೆ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದ್ದು, ಭರ್ಜರಿ ಉಳಿತಾಯದ ಜೊತೆಗೆ ಬಹಳ ಅನುಕೂಲವಾಗಲಿದೆ. ಆದರೆ ಸಿಗರೇಟ್, ಪಾನ್ ಮಸಾಲ ಸೇರಿ ಕೆಲ ವಸ್ತುಗಳ ಮೇಲಿನ ಜಿಎಸ್ಟಿಯನ್ನು 40%ಕ್ಕೆ ಹೆಚ್ಚಿಸಲಾಗಿದೆ. ಆದರೆ ಪ್ರಶ್ನೆ ಬರುವುದು ಮದ್ಯದ ಮೇಲೆ ಜಿಎಸ್‌ಟಿ ಯಾಕೆ ಎಲ್ಲ ಎಂಬುದು.
--------------------------------------------------------------------------------------------------------------
