Prajwal Revanna: ಪ್ರಜ್ವಲ್​ಗೆ ಜೀವಾವಧಿ ಶಿಕ್ಷೆ; 480 ಪುಟಗಳ ತೀರ್ಪು ಬರೆಸಿದ ಜಡ್ಜ್​​ ಮೊದಲು ಶ್ಲಾಘಿಸಿದ್ದು ಇವರನ್ನೇ! ಯಾರದು?

 ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಸುಮಾರು 480 ಪುಟಗಳ ತೀರ್ಪು ಬರೆಯಿಸಿದ್ರು. ಪ್ರಜ್ವಲ್​ ರೇವಣ್ಣ ಕೇಸ್​ನಲ್ಲಿ ಜಡ್ಜ್​ ಶ್ಲಾಘಿಸಿದ್ದು ಯಾರನ್ನು ಗೊತ್ತಾ?

ಬೆಂಗಳೂರು (ಆ 03): ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ (Rape Case) ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವನ ಪರ್ಯಂತ ಜೈಲು ಹಾಗೂ ಒಟ್ಟು 11.60 ಲಕ್ಷ ರೂಗಳ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸುಮಾರು 480 ಪುಟಗಳ ತೀರ್ಪು ಬರೆಯಿಸಿದ ಜಡ್ಜ್, ತೀರ್ಪಿನಲ್ಲಿ ಇವರನ್ನ ಮಾತ್ರ ಶ್ಲಾಘಿಸಿದ್ದಾರೆ.
ಎಸ್ಐಟಿ ತಂಡವನ್ನ ಶ್ಲಾಘಿಸಿದ ಪ್ರಜ್ವಲ್​!
ಅತ್ಯಾಚಾರ ಕೇಸ್​​ನಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೋರ್ಟ್​ ತೀರ್ಪು ನೀಡುವ ವೇಳೆ ಸೂಕ್ಷ್ಮವಾಗಿ, ಇಂಚಿಂಚು ಮಾಹಿತಿ ಬಿಡದೆ ನಿಖರವಾಗಿ ತನಿಖೆ ಮಾಡಿದ ಎಸ್ಐಟಿ ತಂಡವನ್ನು ಕೋರ್ಟ್​ ಶ್ಲಾಘಿಸಿದೆ.

ತೀರ್ಪಿನಲ್ಲಿ ಉಲ್ಲೇಖ
ಎಸ್ಐಟಿ ತನಿಖೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೋರ್ಟ್, ಮಹಿಳೆ ಘನತೆಗೆ ಧಕ್ಕೆ ತರುವಂತಹ ವಿಡಿಯೋ ವೈರಲ್ ಆಗಿರುತ್ತೆ. ಅದರ ಒರಿಜಿನಲ್ ವಿಡಿಯೋ ಮತ್ತು ಫೋಟೋ ಕೂಡ ಪತ್ತೆ ಇರಲಿಲ್ಲ. ಇದರ ಬಗ್ಗೆ ಎಸ್ಐಟಿ ತನಿಖೆ ಆರಂಭವಾಗುತ್ತೆ. ಡಿಜಿಟಲ್ ಎವಿಡೇನ್ಸ್, ಫಾರೆನ್ಸಿಕ್ ಎಕ್ಸಫರ್ಟ್ ಗಳ ಮೂಲಕ ಟೆಕ್ನಿಕಲ್ ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗ್ತಿದೆ.

ಎಸ್ಐಟಿ ತನಿಖೆಯ ರೀತಿ ಸ್ವಾಗತಿಸುತ್ತೇನೆ
ಅಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕತೆ ಬಳಸಿ ತನಿಖೆ ಮಾಡಿ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ನಾವು ಎಸ್ಐಟಿ ತನಿಖೆಯ ರೀತಿಯನ್ನ ಸ್ವಾಗತಿಸುತ್ತೇನೆ. ಸಿಕ್ಕಂತ ಸಾಕ್ಷ್ಯಗಳ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅದನ್ನ ಬಳಸಿಕೊಂಡು ವಾದ ಮಂಡಿಸಿದ್ರು. ಕೋರ್ಟ್​ಗೆ ಮನವರಿಕೆ ಆಗುವ ರೀತಿಯಲ್ಲಿ ವಾದ ಮಾಡಿದ್ದಾರೆ ಎಂದಿದೆ ಕೋರ್ಟ್​. ಎಸ್​ಪಿಪಿ ಅಶೋಕ್ ನಾಯಕ್ ಹಾಗೂ ಬಿಎನ್ ಜಗದೀಶ್ ಕೂಡ ಶಂಸೆಗೆ ಪಾತ್ರರಾಗಿದ್ದಾರೆ.
480 ಪುಟಗಳ ತೀರ್ಪು
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಸುಮಾರು 480 ಪುಟಗಳ ತೀರ್ಪು ಬರೆಯಿಸಿದ್ರು. ಬಳಿಕ ನ್ಯಾ. ಸಂತೋಷ್ ಗಜಾನನ ಭಟ್ ಅವರು ಮಹತ್ವದ ತೀರ್ಪು ಪ್ರಕಟಿಸಿದ್ರು.
Previous Post Next Post