ಮಲೆ ಮಹದೇಶ್ವರ ಬೆಟ್ಟದಲ್ಲಿ ಸತ್ತ ಐದು ಹುಲಿಗಳ ಹೊಟ್ಟೆಯಲ್ಲಿ ಫೋರೇಟ್ ಎಂಬ ವಿಷಕಾರಿ ಅಂಶ ಪತ್ತೆ: ಪಶುವೈದ್ಯರು

ಜೀರ್ಣಕ್ರಿಯೆ ಪೂರ್ಣಗೊಂಡಾಗ ವಿಷ ಮಿಶ್ರಿತ ಆಹಾರವನ್ನು ಸೇವಿಸಿದ 4-5 ಗಂಟೆಗಳ ನಂತರ ಪ್ರಾಣಿಗಳು ಸಾಯುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ವಿಷದ ಅಂಶ ಹೆಚ್ಚಿದ್ದರೆ ಅವು ಒಂದೆರಡು ಗಂಟೆಗಳಲ್ಲಿ ಸಾಯುತ್ತವೆ.

ಬೆಂಗಳೂರು: ಜೂನ್ 26 ರಂದು ಎಂಎಂ ಹಿಲ್ಸ್‌ನಲ್ಲಿ ಸಾವನ್ನಪ್ಪಿದ ಐದು ಹುಲಿಗಳ ಹೊಟ್ಟೆಯಲ್ಲಿ ಮತ್ತು ಸತ್ತ ಎತ್ತಿನ ಮಾಂಸದಲ್ಲಿ ಕೀಟನಾಶಕಗಳಲ್ಲಿ ಕಂಡುಬರುವ ಫೋರೇಟ್ ಎಂಬ ರಾಸಾಯನಿಕ ಅಂಶಗಳು ಇತ್ತೆಂದು ಪಶುವೈದ್ಯರು ಕಂಡುಕೊಂಡಿದ್ದಾರೆ.

ಫೋರೇಟ್ ಕೀಟನಾಶಕಗಳಲ್ಲಿ ಕಂಡುಬರುವ ಕಾರ್ಬೋನೇಟ್ ಸಂಯುಕ್ತವಾಗಿದೆ. ಸತ್ತ ಎತ್ತಿನ ಮೇಲೆ ಫೋರೇಟ್ ಅಂಶ ಹೊಂದಿರುವ ದೊಡ್ಡ ಪ್ರಮಾಣದ ಕೀಟನಾಶಕಗಳನ್ನು ಸ್ಥಳೀಯರು ಲೇಪಿಸಿದ್ದಾರೆ. ಇದನ್ನು ತಿಂದ ಆದು ಹುಲಿಗಳು ಮಾಂಸವನ್ನು ತಿಂದ ಒಂದೆರಡು ಗಂಟೆಗಳಲ್ಲಿ ಸಾವನ್ನಪ್ಪಿವೆ ಎಂದು ಸಾವುಗಳ ತನಿಖೆಗಾಗಿ ರಚಿಸಲಾದ ತಂಡದ ಭಾಗವಾಗಿರುವ ಪಶುವೈದ್ಯರು ತಿಳಿಸಿದ್ದಾರೆ.

ಜೀರ್ಣಕ್ರಿಯೆ ಪೂರ್ಣಗೊಂಡಾಗ ವಿಷ ಮಿಶ್ರಿತ ಆಹಾರವನ್ನು ಸೇವಿಸಿದ 4-5 ಗಂಟೆಗಳ ನಂತರ ಪ್ರಾಣಿಗಳು ಸಾಯುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ವಿಷದ ಅಂಶ ಹೆಚ್ಚಿದ್ದರೆ ಅವು ಒಂದೆರಡು ಗಂಟೆಗಳಲ್ಲಿ ಸಾಯುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಕೆಲವು ರಾಸಾಯನಿಕ ಅಂಶಗಳು ಕಂಡು ಬಂದಿವೆ, ಆದರೆ ಅವುಗಳ ಪ್ರಮಾಣ ಮತ್ತು ಇತರ ರಾಸಾಯನಿಕಗಳ ಉಪಸ್ಥಿತಿಯನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಅಂತಿಮ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಎಫ್‌ಎಸ್‌ಎಲ್ ವರದಿಗಳ ಮೊದಲ ಸೆಟ್ ಮೂರು ದಿನಗಳಲ್ಲಿ ಲಭ್ಯವಾಗಲಿದೆ ಮತ್ತು ವಿವರವಾದ ಅಂತಿಮ ವರದಿಯು ಒಂದು ಅಥವಾ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ತನಿಖೆಯ ಭಾಗವಾಗಿರುವ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಯನ್ನು ಪಡೆದ ನಂತರ, ರಾಸಾಯನಿಕಗಳನ್ನು ನಿಷೇಧಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿಯುತ್ತದೆ" ಎಂದು ತಜ್ಞರು ತಿಳಿಸಿದ್ದಾರೆ.

Previous Post Next Post