ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಉಡುಪಿ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಪ್ರಥಮ, ಘೋರವ ಕುಣಿತ ದ್ವಿತೀಯ, ಲಂಬಾಣಿ ನೃತ್ಯ ತೃತೀಯ ಬಹುಮಾನ ಪಡೆದಿವೆ.
ಮೈಸೂರು: ದಸರಾ (Dasara) ಮಹೋತ್ಸವದಲ್ಲಿ ಜಂಬೂ ಸವಾರಿ ಹೆಚ್ಚು ಆಕರ್ಷಣೆಗೊಳ್ಳುತ್ತದೆ. ಚಿನ್ನದ ಅಂಬಾರಿ ಒಂದು ಕಡೆ ಗಮನ ಸೆಳೆದ್ರೆ, ಮತ್ತೊಂದು ಕಡೆ ಜಂಬೂ ಸವಾರಿ ಮೆರವಣಿಗೆಯಲ್ಲಿ ರಸ್ತೆಯ ಉದ್ದಕ್ಕೂ ಸಾಗುವ ರಾಜ್ಯದ ಅನೇಕ ಜಿಲ್ಲೆಯ ನೂರಾರು ಕಲೆಗಳನ್ನು ಸಾರುವ ಕಲಾತಂಡಗಳು ತಮ್ಮ ಪಾತ್ರವನ್ನು ನಿರ್ವಹಿಸುತ್ತಿವೆ. ಹೌದು ವಿಶ್ವ ವಿಖ್ಯಾತ ಮೈಸೂರು (Mysuru) ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳು ಜನರನ್ನು ರಂಜಿಸುತ್ತವೆ. ಈ ರೀತಿ ಜಂಬೂ ಸವಾರಿಗೆ ಅಗಮಿಸಿದ್ದ ಕಲಾತಂಡಗಳಿಗೆ ಬಹುಮಾನ (Prize) ವಿತರಣೆ ಮಾಡಿದ್ದು, ಯಾವ ಜಿಲ್ಲೆಯ ಕಲಾ ತಂಡ ಪ್ರಥಮ ಸ್ಥಾನ ಪಡೆದಿದೆ ಎನ್ನುವ ಸ್ಟೋರಿ ಇಲ್ಲಿದೆ ನೋಡಿ.
ಉಡುಪಿ ಜಿಲ್ಲೆ ಪ್ರಥಮ ಸ್ಥಾನ
ದಸರಾ ಕಲಾ ತಂಡಗಳ ಪೈಕಿ ಉಡುಪಿ ಜಿಲ್ಲೆಯ ಪಡುಬೈಲೂರಿನ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡವು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೊದಲ ಬಹುಮಾನ ಪಡೆದಿದೆ. ಈ ತಂಡ 15 ಸಾವಿರ ನಗದನ್ನು ಪಡೆದುಕೊಂಡಿದೆ. ಇನ್ನು ದ್ವೀತಿಯ ಬಹುಮಾನವನ್ನು ಚಾಮರಾಜನಗರ ಜಿಲ್ಲೆಯ ಗೊರವ ಕುಣಿತಕ್ಕೆ ಸಿಕ್ಕಿದ್ದು, ಭಕ್ತ ಕನಕದಾಸರ ಗೊರವರ ಕುಣಿತ ಕಲಾ ಸಂಘ ಪಾತ್ರವಾಗಿದ್ದು 5 ಸಾವಿರ ನಗದು ಬಹುಮಾನಕ್ಕೆ ಪಾತ್ರವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಫಾಲೋ ಮಾಡಿ ಲಿಂಕ್ : https://www.instagram.com/newstationkannada/
ನಮ್ಮ ಫೇಸ್ಬುಕ್ ಪೇಜ್ ಲಿಂಕ್ :
https://www.facebook.com/Publicneedsofficial16/
ನಮ್ಮ X ಪೇಜ್ ಲಿಂಕ್ :
ನಮ್ಮ ವಾಟ್ಸಪ್ಪ್ ಪೇಜ್ ಲಿಂಕ್ :