ರಷ್ಯಾ-ಭಾರತ ಸ್ನೇಹ ಕಡಿತಕ್ಕೆ ಅಮೆರಿಕ ಮುಂದು; ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಸಾಧ್ಯತೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ನೂತನ ಒಪ್ಪಂದದಿಂದಾಗಿ ಭಾರತದ ಮೇಲೆ ಹೇರಿರುವ ಸುಂಕದ ಪೈಕಿ ಶೇ.15-16 ರಷ್ಟು‌ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


ನವದೆಹಲಿ: ರಷ್ಯಾ ತೈಲ ಆಮದು ಕಡಿತಕ್ಕೆ ಹರಸಾಹಸ ಪಡುತ್ತಿರುವ ಅಮೆರಿಕ ಸರ್ಕಾರ ಇದೀಗ ಭಾರತದೊಂದಿಗೆ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಏರ್ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ನೂತನ ಒಪ್ಪಂದದಿಂದಾಗಿ ಭಾರತದ ಮೇಲೆ ಹೇರಿರುವ ಸುಂಕದ ಪೈಕಿ ಶೇ.15-16 ರಷ್ಟು‌ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಭಾರತ ಹಾಗೂ ಅಮೆರಿಕ ನಡುವಣ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಏರ್ಪಡುವ ಸಾಧ್ಯತೆ ದಟ್ಟವಾಗಿದ್ದು, ಒಂದು ವೇಳೆ ಇದು ಸಾಧ್ಯವಾದರೆ, ಭಾರತದಿಂದ ಆಮದಾಗುವ ಸರುಕಗಳ ಮೇಲೆ ಅಮೆರಿಕ ವಿಧಿಸುತ್ತಿರುವ ಸುಂಕ ಶೇ 15-16 ರಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮಂಗಳವಾರ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದಿದ್ದಾರೆ. ಉಭಯ ನಾಯಕರು ಮಾತುಕತೆ ನಡೆಸಿರುವುದನ್ನು ಮೋದಿ ಅವರೂ ಖಚಿತಪಡಿಸಿದ್ದಾರೆ. ಆದರೆ, ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, 'ಕರೆ ಮಾಡಿ, ದೀಪಾವಳಿ ಶುಭಾಶಯ ತಿಳಿಸಿದ ಅಧ್ಯಕ್ಷ ಟ್ರಂಪ್‌ ಅವರಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ. ಹಾಗೆಯೇ, 'ನಮ್ಮ ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳು ಜಗತ್ತನ್ನು ಭರವಸೆಯ ಬೆಳಕಿನಿಂದ ಬೆಳಗುವುದನ್ನು ಮುಂದುವರಿಸಲಿ. ಎಲ್ಲ ರೀತಿಯ ಭಯೋತ್ಪಾದನೆ ವಿರುದ್ಧ ನಿಲ್ಲಲಿ ಎಂದು ಬೆಳಕಿನ ಹಬ್ಬದಂದು ಆಶಿಸುತ್ತೇನೆʼ ಎಂದೂ ಬರೆದುಕೊಂಡಿದ್ದಾರೆ.

-------------------------------------------------------------------------------------------------------------------------------------------------------

ಹೆಚ್ಚಿನ ಮಾಹಿತಿಗಾಗಿ ನಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಫಾಲೋ ಮಾಡಿ ಲಿಂಕ್ : https://www.instagram.com/newstationkannada/

ನಮ್ಮ ಫೇಸ್ಬುಕ್ ಪೇಜ್ ಲಿಂಕ್ :

https://www.facebook.com/Publicneedsofficial16/

ನಮ್ಮ X ಪೇಜ್ ಲಿಂಕ್ :

https://x.com/newstationk

ನಮ್ಮ ವಾಟ್ಸಪ್ಪ್ ಪೇಜ್ ಲಿಂಕ್ :

https://chat.whatsapp.com/LrPQSME0Afv6NxOZaNp9UU

Previous Post Next Post