ಪಂಚವರ್ಣದಿಂದ ವಿಶ್ವದಾಖಲೆ ಬರೆದ ಭರತನಾಟ್ಯ ಕಲಾವಿದೆ ದಿಕ್ಷಾಗೆ ಸನ್ಮಾನ

Date : 13/09/2025 Published by : Sandeep Kumar T

ಕೋಟ: ಜೀವನದಲ್ಲಿ  ಸಾಧನೆಗೆ ಗಳಿಸಬೇಕಾದೆರೆ  ಗುರಿ ಇರಬೇಕು ಆಗ ಮಾತ್ರ ಯಶಸ್ಸು ತಮ್ಮತ್ತ ಮುಖ ಮಾಡಲು ಸಾಧ್ಯ ಎಂದು ಇತ್ತೀಚಿಗೆ ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ಕಲಾವಿದೆ ವಿದೂಷಿ ದಿಕ್ಷಾ ಬ್ರಹ್ಮಾವರ ಹೇಳಿದರು.

newstationkannada

ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ವತಿಯಿಂದ ವಿಶ್ವಸಾಧಕಿ ದಿಕ್ಷಾ ಬ್ರಹ್ಮಾವರ ಇವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿಯೊಬ್ಬರಲ್ಲೂ ಕಲೆ ಇರುತ್ತದೆ ಅದು ಹೊರಸೂಸಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಈ ನಿಟ್ಟಿನಲ್ಲಿ ನನ್ನ ಈ ಸಾಧನೆಗೆ ಪತಿ ಹಾಗೂ ಕುಟುಂಬಿಕರು,ಗುರುಗಳ ಶ್ರೀ ರಕ್ಷೆ ಜತೆಗೆ ನನ್ನ ಪರಿಶ್ರಮ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಪರಿಸರಸ್ನೇಹಿ ಪಂಚವರ್ಣ ಸಂಘಟನೆಯಿಂದ ಸ್ವೀಕರಿಸುವ ಭಾಗ್ಯ ಧನ್ಯತೆಯನ್ನು ಕಾಣುವಂತ್ತಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಟದ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ ಮತ್ತು ಗಣೇಶ್ ನೆಲ್ಲಿಬೆಟ್ಟು ಇವರು ದಿಕ್ಷಾ ಬ್ರಹ್ಮಾವರ ಇವರನ್ನು ಸನ್ಮಾನಿಸಿದರು.

ದಿಕ್ಷಾ ಇವರ ಪತಿ ರಾಹುಲ್,ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಾಕಾಧ್ಯಕ್ಷ  ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಗ್ರಾ.ಪ ಮಾಜಿ ಸದಸ್ಯ ರವೀಂದ್ರ ಜೋಗಿ, ಪಂಚವರ್ಣ ಉಪಾಧ್ಯಕ್ಷ ದಿನೇಶ್ ಆಚಾರ್, ಜೆಸಿಐ ಸಿನಿಯರ್ ಲಿಜನ್ ಕೋಟ ಅಧ್ಯಕ್ಷ ಕೇಶವ ಆಚಾರ್, ಪಂಚವರ್ಣದ ಮಾಜಿ ಅಧ್ಯಕ್ಷರಾದ ಅಜಿತ್ ಆಚಾರ್, ಗಿರೀಶ್ ಆಚಾರ್ ಮತ್ತಿತರರು ಇದ್ದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

newstationkannada

---------------------------------------------------------------------------------------------------------------------------------

Previous Post Next Post