Rakesh Poojary Death: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಅಕಾಲಿಕ ನಿಧನ: ಸಾವಿಗೆ ಕಾರಣವೇನು?

‘ಕಾಮಿಡಿ ಕಿಲಾಡಿಗಳು ಸೀಸನ್ 3’ ಕಾರ್ಯಕ್ರಮದಲ್ಲಿ ವಿನ್ನರ್ ಆದವರು ರಾಕೇಶ್ ಪೂಜಾರಿ. ‘ಹಿಟ್ಲರ್‌ ಕಲ್ಯಾಣ’ ಸೀರಿಯಲ್‌ನಲ್ಲೂ ಕಾಮಿಡಿ ಕಚಗುಳಿ ನೀಡಿದ್ದ ರಾಕೇಶ್ ಪೂಜಾರಿ ಇನ್ನಿಲ್ಲ. ಹೃದಯಾಘಾತದಿಂದ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ.

   

     Highlights :

  • 'ಕಾಮಿಡಿ ಕಿಲಾಡಿಗಳು ಸೀಸನ್ 3' ವಿಜೇತ ರಾಕೇಶ್ ಪೂಜಾರಿ ಇನ್ನಿಲ್ಲ
  • ಹೃದಯಾಘಾತದಿಂದ ರಾಕೇಶ್ ಪೂಜಾರಿ ವಿಧಿವಶ
  • 'ಹಿಟ್ಲರ್ ಕಲ್ಯಾಣ' ಸೀರಿಯಲ್‌ನಲ್ಲಿ ನಟಿಸಿದ್ದ ಉಡುಪಿ ಮೂಲದ ರಾಕೇಶ್ ಪೂಜಾರಿ

  • ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ‘ಕಾಮಿಡಿ ಕಿಲಾಡಿಗಳು ಸೀಸನ್‌ 3’ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ರಾಕೇಶ್ ಪೂಜಾರಿ ಚಿರನಿದ್ರೆಗೆ ಜಾರಿದ್ದಾರೆ. ರಾಕೇಶ್ ಪೂಜಾರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ ರಾಕೇಶ್ ಪೂಜಾರಿ.
  • ರಾಕೇಶ್ ಪೂಜಾರಿ ಸಾವಿಗೆ ಕಾರಣವೇನು?

    ರಾಕೇಶ್ ಪೂಜಾರಿ ಆರೋಗ್ಯವಾಗಿಯೇ ಇದ್ದವರು. ಮೇ 11 ರಂದು ಸ್ನೇಹಿತರ ಮದುವೆ ಕಾರ್ಯಕ್ರಮದಲ್ಲಿ ರಾಕೇಶ್ ಪೂಜಾರಿ ಪಾಲ್ಗೊಂಡಿದ್ದರು. ಅದಾದ್ಮೇಲೆ ಅವರಿಗೆ ದಿಢೀರನೆ ಸುಸ್ತು ಕಾಣಿಸಿದೆ. ಲೋ ಬಿಪಿಯಾಗಿದೆ. ಪಲ್ಸ್ ರೇಟ್ ಕೂಡ ಕಡಿಮೆ ಆಗಿದೆ. ಕೂಡಲೆ ರಾಕೇಶ್ ಪೂಜಾರಿ ಅವರನ್ನ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಸುಕಿನ 3.30 ಸುಮಾರಿಗೆ ಹೃದಯಾಘಾತದಿಂದ ರಾಕೇಶ್ ಪೂಜಾರಿ ಕೊನೆಯುಸಿರೆಳೆದಿದ್ದಾರೆ

Post a Comment

Previous Post Next Post