Ind Vs Eng Test Series - ರೋಹಿತ್ ಶರ್ಮಾ ಉತ್ತರಾಧಿಕಾರಿ ಯಾರು?: ಮೂವರ ಮಧ್ಯದಿಂದ ಎದ್ದು ಬರ್ತಾರಾ ಕೆಎಲ್ ರಾಹುಲ್?

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿನ ಯುವ ಆಟದಾರ ಶುಭ್ಮನ್ ಗಿಲ್ ನಾಯಕನಾಗುವ ಸಾಧ್ಯತೆ ಇದ್ದು ಆಯ್ಕೆ ಸಮಿತಿಯು ಕೆ.ಎಲ್.ರಾಹುಲ್ ಹೆಸರನ್ನು ಸಹ ಪರಿಗಣಿಸುತ್ತಿದೆ. ಹೀಗಿರುವಾಗ ನವಚೈತನ್ಯದಿಂದ ಕೂಡಿದ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ. ಸದ್ಯಕ್ಕೆ ಟೆಸ್ಟ್ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ, ಏಕದಿನ ತಂಡದ ಉಪನಾಯಕ ಶುಭಮನ್ ಗಿಲ್, ಅನುಭವೀ ಆಟಗಾರ ಕೆಎಲ್ ರಾಹುಲ್ ಬಿಸಿಸಿಐ ಮುಂದಿರುವ ಮೂರು ಆಯ್ಕೆಗಳು. ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜೂನ್ 20 ರಂದು ಪ್ರಾರಂಭವಾಗಲಿದೆ. ಈ ಸರಣಿಗಾಗಿ ತಂಡವನ್ನು ಮೇ 16 ಅಥವಾ 17 ರಂದು ಪ್ರಕಟಿಸಲಾಗುವುದು. ಅಂದೇ ನಾಯಕನ ಆಯ್ಕೆ ಆಗುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿರುವುದರಿಂದ ಇದೀಗ ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕನನ್ನು ಕಂಡುಕೊಳ್ಳಬೇಕಾಗಿದೆ. ಹಾಗಾಗಿ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಶುಭ್‌ಮನ್ ಗಿಲ್ ನಾಯಕನಾಗುವ ರೇಸ್‌ನಲ್ಲಿ ಮುಂದಿದ್ದು ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಅವರ ಹೆಸರೂ ಚಾಲ್ತಿಯಲ್ಲಿದೆ. ತಂಡವನ್ನು ಮೇ 16 ಅಥವಾ 17 ರಂದು ಪ್ರಕಟಿಸುವ ಸಾಧ್ಯತೆ ಇದ್ದು ಅದಕ್ಕೂ ಮೊದಲೇ ಅಥವಾ ಅದೇ ವೇಳೆ ತಂಡದ ನಾಯಕ ಆಯ್ಕೆ ಆಗುವ ಸಾಧ್ಯತೆ ಇದೆ. ಬಳಿಕ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಜೂನ್ 6 ರಂದು ಇಂಗ್ಲೆಂಡ್‌ಗೆ ತೆರಳಿ ಸರಣಿಗೆ ತಯಾರಿ ನಡೆಸಲಿದ್ದಾರೆ.

ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ, ಆಯ್ಕೆದಾರರು ಇಂಗ್ಲೆಂಡ್ ವಿರುದ್ಧದ ಸರಣಿಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಶುಭ್‌ಮನ್ ಗಿಲ್ ಪ್ರಮುಖ ಆಕಾಂಕ್ಷಿಯಾಗಿದ್ದು ಬಿಸಿಸಿಐ ಆಯ್ಕೆ ಸಮಿತಿ ಬಹುತೇಕ ಅವರಿಗೇ ನಾಯಕಪಟ್ಟ ಕಟ್ಟುವ ಸಾಧ್ಯತೆ ಇದೆ. ಇನ್ನು ಇವರ ಜೊತೆ ರೇಸ್ ನಲ್ಲಿ ಇರುವವರು ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್

ಕೆಎಲ್ ರಾಹುಲ್ Vs ಗಿಲ್ ಪೈಪೋಟಿ

ಮೂಲಗಳ ಪ್ರಕಾರ ಬಿಸಿಸಿಐ ಆಯ್ಕೆ ಸಮಿತಿಯ ಕೆಲವು ಸದಸ್ಯರು ಕೆ.ಎಲ್. ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಶುಭ್‌ಮನ್ ಗಿಲ್ ಈಗಾಗಲೇ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಕಳೆದ ಟಿ20 ವಿಶ್ವಕಪ್ ಗೆದ್ದ ನಂತರ, ಪ್ರಮುಖ ಆಟಗಾರರು ಇಲ್ಲದ ತಂಡವನ್ನು ಅವರು ಐದು ಟಿ20 ಪಂದ್ಯಗಳಲ್ಲಿ ಮುನ್ನಡೆಸಿದರು. ಆದರೆ, ಅವರು ಈವರೆಗೆ ಟೆಸ್ಟ್ ಅಥವಾ ODI ಪಂದ್ಯಗಳಲ್ಲಿ ನಾಯಕತ್ವ ವಹಿಸಿಲ್ಲ. ಅವರ ನಾಯಕತ್ವದ ಗುಣಗಳನ್ನು ಗಮನಿಸಿ ಬಿಸಿಸಿಐ ಮತ್ತು ಆಯ್ಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಿಲ್ 32 ಟೆಸ್ಟ್ ಪಂದ್ಯಗಳಲ್ಲಿ 1893 ರನ್ ಗಳಿಸಿದ್ದಾರೆ. ಅವರು 59 ಇನ್ನಿಂಗ್ಸ್‌ಗಳಲ್ಲಿ ಐದು ಶತಕ ಮತ್ತು ಏಳು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 35.05 ಆಗಿದೆ. ಅವರ ಗರಿಷ್ಠ ಸ್ಕೋರ್ 128. ಇನ್ನು ಕೆಎಲ್ ರಾಹುಲ್ ಅವರು 58 ಚೆಸ್ಟ್ ಪುಂದ್ಯಗಳ 101 ಇನ್ನಿಂಗ್ಸ್ ಗಳಿಂದ 33.57 ಸರಾಸರಿಯಲ್ಲಿ 3257 ರನ್ ಲೆ ಹಾಕಿದ್ದಾರೆ.

ಯುವ ಆಟಗಾರರಿಗೆ ಅವಕಾಶ

ಈ ಸರಣಿಯು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಹೊಸ ನಾಯಕನೊಂದಿಗೆ ತಂಡವು ಹೇಗೆ ಆಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯುವ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದೆ. ಅವರು ತಮ್ಮ ಪ್ರತಿಭೆಯನ್ನು ತೋರಿಸಲು ಮತ್ತು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ರೋಹಿತ್ ಶರ್ಮಾ ಅವರು 38 ವರ್ಷ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅವರು ಬಿಸಿಸಿಐಗೆ ಈ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. "ನಾನು ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಗಿಸಿದ್ದೇನೆ" ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.



Post a Comment

Previous Post Next Post