67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿಅವಘಡ, 4 ಸಾವಿರ ಮಂದಿ ಸ್ಥಳಾಂತರ, ಮೈ ಜುಮ್ಮೆನಿಸುವ Video

ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ದುಬೈ: ಬರೊಬ್ಬರಿ 67 ಅಂತಸ್ತಿನ ಗಗನಚುಂಬಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿದ್ದ ಸುಮಾರು 4 ಸಾವಿರ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಖಳಾಂತರಗೊಳಿಸಲಾಗಿದೆ.

ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಟೈಗರ್ ಟವರ್ ಎಂದು ಕರೆಯಲ್ಪಡುವ ಮರೀನಾ ಪಿನಾಕಲ್‌ ಕಟ್ಟಡದಲ್ಲಿ ಮೇ 2015 ರಲ್ಲಿ ಸಹ ಅಗ್ನಿ ಅವಘಡ ಸಂಭವಿಸಿತ್ತು. ಆಗ 47 ನೇ ಮಹಡಿಯಲ್ಲಿ ಬೆಂಕಿ ತಗುಲಿ 48 ನೇ ಮಹಡಿಗೂ ವ್ಯಾಪಿಸಿತ್ತು. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಅಗ್ಮಿಶಾಮಕ ಸಿಬ್ಬಂದಿ ಈ ಕಟ್ಟಡದಲ್ಲಿದ್ದ ಸುಮಾರು 4,000 ಜನರನ್ನು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಕಟ್ಟಡದ 35ನೇ ಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಇಡೀ ಕಟ್ಟಡ ಒಣಗಿದ ಮರದಂತೆ ಹೊತ್ತಿ ಉರಿದಿದೆ. ಇದರಿಂದ ಇಡೀ ನಗರಾದ್ಯಂತ ಹೊಗೆ ಆವರಿಸಿತ್ತು. ಇಂತಹ ಅಗ್ನಿ ದುರಂತವನ್ನು ರಕ್ಷಣಾ ತಂಡಗಳು ಜಾಗರೂಕತೆಯಿಂದ ನಿಭಾಯಿಸಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

Previous Post Next Post