ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ನಾನು ಧನ್ಯವಾದ ಹೇಳುತ್ತೇನೆ. ಅಶೋಕ ವಶ ನಾಶಮಾಡುವಾಗ ಆಂಜನೇಯ ಅನುಸರಿಸಿದ ಆದರ್ಶವನ್ನು ನಾವು ಅನುಸರಿಸಿದ್ದೇವೆ ಎಂದರು.
ನವದೆಹಲಿ: Operation Sindoor ಯಶಸ್ಸಿನ ನಂತರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ನಿರ್ಣಾಯಕ ಸಂದೇಶವನ್ನು ನೀಡಿ ಪಾಕಿಸ್ತಾನವನ್ನು ಬಲವಾಗಿ ಟೀಕಿಸಿದರು. BRO ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಭಾರತೀಯ ಪಡೆಗಳು ಮಾಡಿದ್ದು ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಇತಿಹಾಸ ಸೃಷ್ಟಿಸಿದ ಧೈರ್ಯಶಾಲಿ ಕಾರ್ಯಾಚರಣೆಯಾಗಿದೆ ಎಂದು ಹೇಳಿದರು.
ಭಾರತದ ಪಡೆಗಳು "ನಿಖರತೆ, ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ" ದಾಳಿ ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅದು ಪ್ರಪಂಚದಾದ್ಯಂತ ಪ್ರತಿಧ್ವನಿಸಿದೆ. ನಾವು ನಿಗದಿಪಡಿಸಿದ ಗುರಿಗಳನ್ನು ಒಂದೊಂದಾಗಿ ನಾಶಪಡಿಸಿದ್ದೇವೆ. ಮತ್ತು ಅದು ಕೂಡ ಒಬ್ಬ ನಾಗರಿಕನಿಗೂ ತೊಂದರೆಯಾಗದ ರೀತಿಯಲ್ಲಿ. ಇದು ಭಾರತದ ಮಿಲಿಟರಿ ನೀತಿಶಾಸ್ತ್ರದ ವಿಶಿಷ್ಟ ಲಕ್ಷಣವಾಗಿದೆ ಎಂದು ಅವರು ಹೇಳಿದರು.
ನಿಮಗೆಲ್ಲರಿಗೂ ತಿಳಿದಿರುವಂತೆ, ನಿನ್ನೆ ರಾತ್ರಿ ಭಾರತೀಯ ಪಡೆಗಳು ತಮ್ಮ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿವೆ. ಭಾರತೀಯ ಸೇನೆಯು ನಿಖರತೆ, ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ ಕ್ರಮ ಕೈಗೊಂಡಿದೆ. ನಾವು ನಿಗದಿಪಡಿಸಿದ ಗುರಿಗಳನ್ನು ಯೋಜಿತ ಯೋಜನೆಯಂತೆ ನಿಖರವಾಗಿ ಮತ್ತು ನಿರ್ದಿಷ್ಠವಾಗಿ ನಾಶಪಡಿಸಲಾಯಿತು. ಯಾವುದೇ ನಾಗರಿಕ ಸ್ಥಳ ಅಥವಾ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರದಂತೆ ಸೂಕ್ಷ್ಮತೆಯನ್ನು ತೋರಿಸಲಾಗಿದೆ. ಅಂದರೆ ಸೈನ್ಯವು ಒಂದು ರೀತಿಯ ನಿಖರತೆ, ಮುನ್ನೆಚ್ಚರಿಕೆ ಮತ್ತು ಸಹಾನುಭೂತಿಯನ್ನು ತೋರಿಸಿದೆ. ಇದಕ್ಕಾಗಿ ನಾನು ನಮ್ಮ ಯೋಧರಿಗೆ ಮತ್ತು ಅಧಿಕಾರಿಗಳನ್ನು ಇಡೀ ದೇಶದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಅಶೋಕ ವಶ ನಾಶದ ಕುರಿತು ಭಗವಂತ ಆಂಜನೇಯ ಮತ್ತು ರಾವಣ ನಡುವಿನ ಸಂಭಾಷಣೆಯನ್ನು ಉಲ್ಲೇಖಿಸಿದ ರಾಜನಾಥ ಸಿಂಗ್, ಸೇನೆಗೆ ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ನಾನು ಧನ್ಯವಾದ ಹೇಳುತ್ತೇನೆ. ಅಶೋಕ ವಶ ನಾಶಮಾಡುವಾಗ ಆಂಜನೇಯ ಅನುಸರಿಸಿದ "ಜಿನ್ ಮೋಹಿ ಮಾರಾ, ತಿನ್ ಮೋಹಿ ಮಾರೆ" (ನಮ್ಮ ಮುಗ್ಧ ಜನರನ್ನು ಕೊಂದವರನ್ನೇ ನಾವು ಕೊಂದಿದ್ದೇವೆ. ನಮ್ಮ ಮುಗ್ಧ ಜನರನ್ನು ಕೊಂದವರನ್ನೇ ನಾವು ಗುರಿಯಾಗಿಸಿಕೊಂಡಿದ್ದೇವೆ) ಆದರ್ಶವನ್ನು ನಾವು ಅನುಸರಿಸಿದ್ದೇವೆ ಎಂದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಮ್ಮ ಪಡೆಗಳು 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸುವ ಮೂಲಕ, ಹಿಂದಿನಂತೆ ಈ ಬಾರಿಯೂ ಭಯೋತ್ಪಾದಕರಿಗೆ ತರಬೇತಿ ನೀಡುವ ಶಿಬಿರಗಳನ್ನು ನಾಶಪಡಿಸುವ ಮೂಲಕ ಸೂಕ್ತ ಉತ್ತರವನ್ನು ನೀಡಿವೆ ಎಂದು ಅವರು ಹೇಳಿದರು. ಈ ದಾಳಿ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವುಗಳ ಮೂಲಸೌಕರ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಭಾರತ ಭಯೋತ್ಪಾದನೆಗೆ ಹೆದರುವುದಿಲ್ಲ ಎಂಬ ಸಂದೇಶ ಹೋಗುತ್ತದೆ. ಆದರೆ ಮುಗ್ಧ ಜನರ ಮೇಲೆ ಕೈ ಎತ್ತುವ ಸ್ವಭಾವವಿಲ್ಲ ಎಂದು ಅವರು ಹೇಳಿದರು. "ಭಾರತವು ತನ್ನ ನೆಲದ ಮೇಲಿನ ದಾಳಿಗೆ 'ಪ್ರತಿಕ್ರಿಯಿಸುವ ಹಕ್ಕನ್ನು' ಬಳಸಿಕೊಂಡಿದೆ. ನಮ್ಮ ಕ್ರಮವನ್ನು ಬಹಳ ಚಿಂತನಶೀಲವಾಗಿ ಮತ್ತು ಯೋಜಿತ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ. ಭಯೋತ್ಪಾದಕರ ನೈತಿಕ ಸ್ಥೈರ್ಯವನ್ನು ಮುರಿಯುವ ಉದ್ದೇಶದಿಂದ, ಈ ಕ್ರಮವನ್ನು ಅವರ ಶಿಬಿರಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ನಾನು ಮತ್ತೊಮ್ಮೆ ವಂದಿಸುತ್ತೇನೆ" ಎಂದು ಅವರು ಹೇಳಿದರು.
Post a Comment