ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿರುವ ಬೆದರಿಕೆಗಳು ಹರಿದಾಡುತ್ತಿವೆ. ಶರತ್ ಪಂಪ್ ವೆಲ್ ಮತ್ತು ಭರತ್ ಕುಮ್ಡೇಲ್ ಅವರನ್ನು ಕೊಲ್ಲುವುದಾಗಿ ಪೋಸ್ಟ್ ಗಳು ವೈರಲ್ ಆಗಿವೆ. ಈ ಬೆದರಿಕೆಗಳ ಹಿನ್ನೆಲೆಯಲ್ಲಿ, ಹತ್ಯೆ ಸಂಭವಿಸುವ ಮುನ್ಸೂಚನೆಗಳು ಹೆಚ್ಚಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
HIGHLIGHTS :
1.05-05-2025, ರಾತ್ರಿ 9-30...ನಿನ್ನದೇ ಸ್ಥಳದಲ್ಲಿ.. ಎಂಬ ಬೆದರಿಕೆ ಪೋಸ್ಟ್.
2.ಮಂಗಳೂರಲ್ಲಿ ಪ್ರತೀಕಾರದ ರಕ್ತಚರಿತ್ರೆ
3.ಧರ್ಮಗಳ ನಡುವಿನ ಸಂಘರ್ಷಕ್ಕೆ ಕೊನೆಯಾವಾಗ?
ಮುಂದಿನ ಟಾರ್ಗೆಟ್!
ಎಸ್‌ಡಿಪಿಐನ ಅಶ್ರಫ್ ಕಲಾಯಿ ಯನ್ನು 2017 ರಲ್ಲಿ ಬಂಟ್ವಾಳದ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರ ಪ್ರತೀಕವಾಗಿ ಶರತ್ ಮಡಿವಾಳ ಹತ್ಯೆಯಾಯಿತು. ನಂತರ ಅಶ್ರಫ್ ಕೊಂದ ಭರತ್ ನನ್ನ ಮರೆತಿಲ್ಲ, ವೈಯ್ಟ್ ಆಂಡ್ ವಾಚ್, ಎಂದು ಕೇವಲ 8 ಗಂಟೆ ಮೊದಲು on fixed leader ಎಂಬ ಹೆಸರಿನ ಇನ್ ಸ್ಟಾ ಪೇಜ್, ಹಾಗೂ, 2024 ರಲ್ಲೇ ಅನ್ಯಾಯವಾಗಿ ಕೊಂದ ಪಾಪಿಗಳನ್ನು ಮರೆತಿಲ್ಲ, ಎಂಬ ಪೋಸ್ಟ್ ಕೂಡಾ ಹಂಚಿಕೊಳ್ಳಲಾಗಿತ್ತು. ಇಷ್ಟೆ ಅಲ್ಲದೆ ಶರಣ್ ಪಂಪ್ ವೆಲ್, ಹತ್ಯೆಯಾಗಲು ತಯಾರಾಗಿರು ಎಂದೂ ಪೋಸ್ಟ್ ಮಾಡಲಾಗಿದೆ.
ಫಿನಿಶ್ ಎಂಬ ಪೋಸ್ಟ್ ಬಂದಿತ್ತು!
ಸುಹಾಸ್ ಶೆಟ್ಟಿ ಕೊಲೆ ಬಳಿಕವೂ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೊಲೆ ಬೆದರಿಕೆ, ಟಾರ್ಗೆಟ್ ಮಾಡಿದ್ದ ಪೋಸ್ಟ್ ಗಳು ಕಂಡುಬಂದಿದ್ದವು. ಮಾರ್ಚ್ 31 ರಂದೇ ಸುಹಾಸ್ ಶೆಟ್ಟಿ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬುದು ತಿಳಿದುಬಂದಿದೆ. ಅಂದು ಸುಹಾಸ್ ಶೆಟ್ಟಿ ಫೋಟೋ ಹಾಕಿ 'ರಿವೇಂಜ್ ಸೂನ್' ಎಂದು ಟಾರ್ಗೆಟ್ ಕಿಲ್ಲರ್- 03 ಎಂಬ ಇನ್ ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.
ಬಳಿಕ troll_mayadiaka ಎಂಬ ಇನ್ ಸ್ಟಾ ಪೇಜ್ ನಲ್ಲೊ ಸುಹಾಸ್ ಶೆಟ್ಟಿ ಫೋಟೋ ಹಾಕಿ ಫಿನಿಶ್ ಎಂದು ಬರೆದು, ರೈಟ್ ಎಂಬ ಸಿಂಬಲ್ ನೊಂದಿಗೆ ಮಾರ್ಕ್ ಮಾಡಲಾಗಿತ್ತು. ಅಲ್ಲದೆ ಮುಂದಿನ ವಿಕೆಟ್ ಗಾಗಿ ಕಾಯುತ್ತಿದ್ದೇವೆ ಎಂಬ ಮೆಸೇಜ್ ಕೂಡಾ ಹಾಕಿರುವುದು ಮುಂದಿನ ಟಾರ್ಗೆಟ್ ಯಾರೆಂಬ ಆತಂಕವನ್ನು ಹುಟ್ಟುಹಾಕಿದೆ.
ರಿವೆಂಜ್ ಪೋಸ್ಟ್ ಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ
ಪ್ರತೀಕಾರದ ಸಂದೇಶ ಹಂಚಿಕೊಂಡ ವ್ಯಕ್ತಿಗಳ ಮೇಲೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ.
ಕಲೆ, ಸಂಸ್ಕೃತಿ, ದೇವಸ್ಥಾನಗಳು, ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಈಗ ಕೋಮು ಸಂಘರ್ಷಕ್ಕೆ, ಕೊಲೆ-ಬೆದರಿಕೆಗಳಿಗೆ ಈಡಾಗುತ್ತಿರುವುದು ಬೇಸರದ ಸಂಗತಿ. ಇನ್ನಾದರೂ ಈ ದುರ್ಘಟನೆಗಳಿಗೆ ಅಂತ್ಯಹಾಡಿ ಶಾಂತಿ ನೆಲೆಸುವತ್ತ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಬೇಕೆಂದು ಇಡೀ ನಾಡಿನ ಜನರ ಬೇಡಿಕೆಯಾಗಿದೆ.